ತುಮಕೂರು ಬ್ರೇಕಿಂಗ್…
ಗೇಟ್ ಮುರಿದಿರೋದು ಸರ್ಕಾರಕ್ಕೊಂದು ಅಪಶಕುನದ ಮುನ್ಸೂಚನೆ.
ತುಮಕೂರಿನಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿಕೆ.
ರಾಜ್ಯದಲ್ಲಿ ಕಳೆದ ಒಂದೂಕಾಲ್ ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರಿ ಇಲ್ಲ.
ಆಡಳಿತ ಸರಿಯಾಗಿ ಮಾಡ್ತಿಲ್ಲಾ ಅನ್ನೋದಕ್ಕೆ ಟಿಬಿ ಡ್ಯಾಂ ನ ಗೇಟ್ 19 ಮುರಿದಿರೋದೇ ಸಾಕ್ಷಿ.
ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೂರ್ಣವಾಧಿ ನೀರಾವರಿ ಸಚಿವರನ್ನ ನೇಮಕ ಮಾಡಬೇಕಿತ್ತು.
ಈಗಿರುವವರು ಪಾರ್ಟ್ ಟೈಂ ನೀರಾವರಿ ಮಂತ್ರಿ.
ಅವರು ಆಡಳಿತಕ್ಕಿಂತ ಹೆಚ್ಚು ರಾಜಕಾರಣಕ್ಕೆ ಒತ್ತು ಕೊಡುವಂತ ಸ್ಥಿತಿಯಲ್ಲಿದ್ದಾರೆ.
ಪಕ್ಷದ ಅಧ್ಯಕ್ಷರಾಗಿ, ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆಯುತ್ತೊ ಅಲ್ಲಿ ಹೆಚ್ಚು ಒತ್ತು ಕೊಡಬೇಕಾಗಿದೆ.
ಹೀಗಾಗಿ ನೀರಾವರಿ ಇಲಾಖೆ ಅನಾಥವಾಗಿದೆ.
ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡ್ತೇನೆ.
ಈಗಲಾದರೂ ಎಚ್ಚೆತ್ತುಕೊಂಡು ನೀರಾವರಿ ಇಲಾಖೆಗೆ ಪೂರ್ಣಾವಧಿ ಮಂತ್ರಿಯನ್ನ ನೇಮಕ ಮಾಡಿ.
3 ರಾಜ್ಯಗಳ ಸುಮಾರು 15 ಲಕ್ಷ ಎಕರೆಗೆ ಆಗುವಂತ ನೀರು ವ್ಯರ್ಥವಾಗಿ ಆಂಧ್ರ, ತೆಲಂಗಾಣ ಪಾಲಾಗ್ತಿದೆ.
ನಮ್ಮ ರೈತರು ಕಣ್ಣೀರು ಹಾಕುವಂತ ಪರಿಸ್ಥಿತಿ ಬಂದಿದೆ.
ಸರಿಯಾಗಿ ನಿಭಾಯಿಸದೇ ಇರೋದೇ ಗೇಟ್ ಮುರಿಯೋದಕ್ಕೆ ಮೂಲ ಕಾರಣ.
ಡ್ಯಾಂ ಸೇಫ್ಟಿ ಕಮಿಟಿ ವರದಿ ನೋಡಿದ್ರೆ.
ನೀರಾವರಿ ಇಲಾಖೆ ಅಧಿಕಾರಿಗಳು 100%, 33 ಗೇಟ್ ಗಳನ್ನ ಸಮರ್ಪಕವಾಗಿ ನಿಭಾಯಿಸಬೇಕು.
ಭೇಟಿ ಮಾಡಬೇಕು, ಪರಿಶೀಲನೆ ಮಾಡಬೇಕು, ಸರ್ಟಿಫೈ ಮಾಡಬೇಕು.
ಅದ್ಯಾವುದೂ ಮಾಡದೇ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ.
ರಾಜ್ಯದಲ್ಲಿ ಜನರಿಗೆ ನ್ಯಾಯ ಸಿಗ್ತಿಲ್ಲ, ಕಣ್ಣೀರು ಸುರಿಸುವಂತಹ ಪರಿಸ್ಥಿತಿ ಬಂದಿದೆ.
ಜನರ ಕಣ್ಣೀರಿನ ಶಾಪ ಸಿದ್ದರಾಮಯ್ಯರ ಸರ್ಕಾರಕ್ಕೆ ತಟ್ಟಲಿದೆ.
ಕಣ್ಣೀರಿನಲ್ಲೇ ಸಿದ್ದರಾಮಯ್ಯ ಸರ್ಕಾರ ಕೊಚ್ಚಿ ಹೋಗೋ ಕಾಲ ಬಂದಿದೆ.
ಗೇಟ್ ಮುರಿದಿರೋದು ಸರ್ಕಾರಕ್ಕೊಂದು ಅಪಶಕುನದ ಮುನ್ಸೂಚನೆ ಸಿಕ್ಕಿದೆ.
More Stories
₹15,000 ಕೋಟಿ ವೆಚ್ಚದಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಹೆಚ್ಡಿಕೆ*
*ಆಡಳಿತ ಹಾಳಾಗಿದೆ, ಅಭಿವೃದ್ಧಿ ಪಾತಾಳ ಕಚ್ಚಿದೆ : ಕುಮಾರಸ್ವಾಮಿ ಕಿಡಿ*
ದಸರಾ 1 ಜಾತಿ- 1 ಧರ್ಮಕ್ಕೆ ಸೀಮಿತವಲ್ಲ, ಸರ್ವ ಜನಾಂಗದ ಸಂಭ್ರಮದ ಹಬ್ಬ : ಸಿದ್ದರಾಮಯ್ಯ