ಸಿದ್ದರಾಮಯ್ಯನ ವಾಶ್‌ಔಟ್ ಮಾಡದಿದ್ರೆ ರಾಷ್ಟ ರಾಜಕಾರಣಕ್ಕೂ ಕೈ ಹಾಕ್ತಾರೆ ಎಂಬ ಭೀತಿ ಬಿಜೆಪಿಗೆ ಇದೆ : ಗೌರಿಶಂಕರ್.
ತುಮಕೂರು : ಇಡೀ ದೇಶದಲ್ಲೇ ರಾಷ್ಟ್ರ ನಾಯಕರಾಗಿ, ಅಹಿಂದ ನಾಯಕರಾಗಿ ಸಿ.ಎಂ ಸಿದ್ದರಾಮಯ್ಯ ಹೊರ ಹೊಮ್ಮುತ್ತಿದ್ದಾರೆ. ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರನ್ನ ಈಗಲೇ ವಾಶ್‌ಔಟ್ ಮಾಡದೇ ಹೋದ್ರೆ ಕರ್ನಾಟಕದಲ್ಲಿ ಮಾತ್ರವಲ್ಲ. ರಾಷ್ಟ ರಾಜಕಾರಣಕ್ಕೂ ಕೈ ಹಾಕ್ತಾರೆ ಎಂಬ ಭಯ ಬಿಜೆಪಿಗೆ ಇದೆ. ಹಾಗಾಗಿ, ಸಿದ್ದರಾಮಯ್ಯ ಅವರನ್ನ ಬಿಜೆಪಿ ಟಾರ್ಗೆಟ್ ಮಾಡ್ತಿದೆ ಅಂತಾ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ವಿಚಾರದ ವಿರುದ್ಧ ತುಮಕೂರಿನ ಹೆಬ್ಬೂರಿನಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿ.ಸಿ ಅವರಿಗೆ ಮನವಿ ಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಗೌರಿಶಂಕರ್ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಇಂದು ಪ್ರತಿಭಟನೆ ಕೈಗೊಂಡಿದ್ದೇವೆ. ಪಾರದರ್ಶಕ ಅಡಳಿತ ನಡೆಸುವ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಆಗಿದೆ. ಹಾಗಾಗಿ, ರಾಜ್ಯಪಾಲರು ಕೊಟ್ಟಂತಹ ಪ್ರಾಸಿಕ್ಯೂಷನ್ ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧ ಆಗಿದೆ. ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಕೊಡುವ ಮೂಲಕ ರಾಜ್ಯಪಾಲರನ್ನ ವಾಪಾಸ್ ಕರೆಸಿಕೊಳ್ಳಿ ಅಂತಾ ಆಗ್ರಹಿಸಿದ್ದೇವೆ ಎಂದು ಗೌರಿಶಂಕರ್ ಹೇಳಿದರು.
ಸಿದ್ದರಾಮಯ್ಯ ಅವರ ಕೇಸ್ ನೋಡಿದ್ರೆ ಸ್ಕೂಲ್‌ನ ಮಕ್ಕಳಿಗೂ ಸಹ ಗೊತ್ತಾಗ್ತಿದೆ. ಉದ್ದೇಶಪೂರ್ವಕವಾಗಿ ರಾಜಕೀಯ ಒತ್ತಡ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಗೌರಿಶಂಕರ್ ಆರೋಪಿಸಿದರು.
More Stories
₹15,000 ಕೋಟಿ ವೆಚ್ಚದಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಹೆಚ್ಡಿಕೆ*
*ಆಡಳಿತ ಹಾಳಾಗಿದೆ, ಅಭಿವೃದ್ಧಿ ಪಾತಾಳ ಕಚ್ಚಿದೆ : ಕುಮಾರಸ್ವಾಮಿ ಕಿಡಿ*
ದಸರಾ 1 ಜಾತಿ- 1 ಧರ್ಮಕ್ಕೆ ಸೀಮಿತವಲ್ಲ, ಸರ್ವ ಜನಾಂಗದ ಸಂಭ್ರಮದ ಹಬ್ಬ : ಸಿದ್ದರಾಮಯ್ಯ