ಈಗ ವೆಲ್‌ಕಮ್ ಟ್ರೆಂಡ್, ಸ್ವಾಗತ ಮಾಡುವ ತೀರ್ಮಾನ ಆಗಿದೆ.
ಇದನ್ನ ನಾನು ಸಾರ್ವಜನಿಕವಾಗಿ ಹಾಗೂ ವೈಯಕ್ತಿಕವಾಗಿ ಬಹಳ ಮೆಚ್ಚುಗೆಯಿಂದ ಸ್ವಾಗತ ಮಾಡ್ತೇನೆ.
ನಿಜವಾಗಿ ಯಾರು ಅನ್ಯಾಯಕ್ಕೆ ಒಳಗಾಗಿದ್ರು, ತುಳಿತಕ್ಕೆ ಸಿಕ್ಕದ್ರು, ಊರಿಂದ ಆಚೆ ಇರುವ ಸ್ಥಿತಿಯಲ್ಲಿದ್ರು.
ಅವರಿಗೆ ಎಲ್ಲಾ ಪ್ರಮುಖವಾದ ವಾಹಿನಿಯೊಳಗೆ ಬರುವ ಅವಕಾಶ ಇದೆ.
ಇವರ ಹೆಸರೇಳಿಕೊಂಡು ಚೆನ್ನಾಗಿರೋರೆಲ್ಲ ಯಾವ್ಯಾವೋ ಕಾರಣಕ್ಕೆ ನಾವು ಆ ಜಾತಿಯವರು, ಈ ಜಾತಿಯವರು ಅಂತಾ ಹೇಳಿ.
102 ಕಮ್ಯೂನಿಟಿ ಶೆಡ್ಯೂಲ್ ಕಾಸ್ಟ್ ಆಗಿ. ಇದರ ಎಲ್ಲಾ ರಸವನ್ನ ಯಾರೋ ಬಳಸಿದವರಿಗೆ ಸಮಾಧಾನ ಆಗಿಲ್ಲ.
ನಾನು ಅನೇಕ ಸಭೆಗಳನ್ನ ಮಾಡಿ ಟ್ರೈ ಮಾಡಿದೆ ಮನವೊಲಿಸಲಿಕ್ಕೆ, ಇದನ್ನ ಬಿಡಿ.
ಒಂದು ಸಾರಿ ಜನಸಂಖ್ಯೆಗೆ ಅನುಗುಣವಾಗಿ ರಿಸವೇಷನ್ ಆಗಬೇಕಾದರೆ ನಾಗಮೋಹನ್ ದಾಸ್ ಅವರು ಹೇಳಿದ್ರು.
ಜನಸಂಖ್ಯೆಗೆ ಅನುಗುಣವಾಗಿ ಅಂತಾ ಹೇಳಿದಾಗ ಅದರ ಅನುಗುಣವಾಗಿ ಒಳಮೀಸಲಾತಿ ಮಾಡಬೇಕು.
ಸರಿಸುಮಾರು ಅಂದಿದ್ರೆ ಶೇ. 18ರಷ್ಟು ಇರ್ತಿತ್ತು. ಎಷ್ಟು ಸಂಖ್ಯೆ ಇರ್ತಿದ್ರೋ ಪ್ರಶ್ನೆ ಇರುತ್ತಿರಲಿಲ್ಲ.
ಈಗ ಸ್ಟಿಟ್ಟಾಗಿ ಜನಸಂಖ್ಯೆಗೆ ಅನುಗುಣವಾಗಿ ಅಂದಾಗ ನಮಗೆ ಬೇರೆ ಮಾರ್ಗ ಇರಲಿಲ್ಲ.
ಜನಸಂಖ್ಯೆಗಳನ್ನ ಸರಿಯಾಗಿ ಗುರ್ತಿಸಿ, ನಾವು ಕೊಡಬೇಕಾಗಿತ್ತು.
ನಾನು ಆಧ್ಯಕ್ಷ ಆಗಿದ್ದಾಗ ಇದಕ್ಕೆಲ್ಲ ಸ್ಪಷ್ಟವಾದ ಯಾವ-ಯಾವ ಜನಸಂಖ್ಯೆ ಎಷ್ಟು ಬರುತ್ತದೆ.
ಬರೀ ಎಡಗೈ – ಬಲಗೈ ಅಲ್ಲ. ಅವರ ಜೊತೆ 20-30 ಸಣ್ಣಪುಟ್ಟ ಕಮ್ಯೂನಿಟಿಗಳನ್ನ ಗುರ್ತಿಸಿ ಗ್ರೂಪ್ ಮಾಡಿ ಕೊಟ್ಟಿದ್ದೇವೆ.
ಇದನ್ನ ರಾಜ್ಯ ಸರ್ಕಾರ ತಕ್ಷಣ ಇಂಪ್ಲಿಮೆಂಟ್ ಮಾಡಬೇಕು.
ಸಿದ್ದರಾಮಯ್ಯ ಸರ್ಕಾರ ಶೆಡ್ಯೂಲ್ ಕಾಸ್ಟ್‌ಗೆ ಶೇ.15ರಷ್ಟು ಕೊಡುತ್ತಾರೋ ಅಥವಾ ಶೇ. 17ರಷ್ಟು ಹೋಗ್ತಾರೋ ಅವರಿಗೆ ಬಿಟ್ಟಿದ್ದು.
ನಾವು ಶೇ.17ರಷ್ಟಕ್ಕೆ ಹೋಗಿ ಬಿಟ್ಟಿದ್ದೇವೆ.
ಶೇ. 17 ಪರ್ಸೆಂಟ್‌ಗೆ ಹೋದ್ರೆ ಏನು ಮಾಡಬೇಕು ಅಂತಾ ನಾನು ಸಲ್ಯೂಷನ್ ಕೊಟ್ಟಿದ್ದೇನೆ.
17 ಪರ್ಸೆಂಟ್‌ಗೆ ಹೋಗದೇ ಇದ್ರೆ ಏನು ಮಾಡಬೇಕು ಅಂತಾ ಸದಾಶಿವ ಆಯೋಗದ ವರದಿ ಇದೆ.
ಯಾವುದಾದ್ರೂ ಇಂಪ್ಲಿಮೆಂಟ್ ಮಾಡಲಿ. ತಕ್ಷಣವೇ ಒಳಮೀಸಲಾತಿ ಜಾರಿಗೆ ತರುವುದು ಸೂಕ್ತ.
ಈಗಾಗಲೇ ಸುಮಾರಷ್ಟು ಕಾಲ ಹಾಳಾಗಿದೆ. ಅವರಿಗೆ ಏನೂ ನ್ಯಾಯ ಆಗಿಲ್ಲ.
ಇನ್ನೊಂದು ವೆಲ್‌ಕಮ್ ಟ್ರೆಂಡ್ ಅಂತಾ ನಾನೂ ಬರೆದಿದ್ದೇನೆ. ಸುಪ್ರೀ ಕೋರ್ಟ್ ಕೂಡ ಹೇಳಿದೆ.
ಶೆಡ್ಯೂಲ್ ಕಾಸ್ಟ್ ಕೂಡ ಕೆನೆಪದರನ ಗುರ್ತಿಸಬೇಕು.
ಯಾರಿಗೆ ಶಕ್ತಿ ಇದೆ. ಯಾರು ಈಗಾಗಲೇ ರಿಸವೇಷನ್ ಬಳಸಿಕೊಂಡು ಬೆಳೆದು ಮೇಲೆ ಬಂದಿದ್ದಾರೆ.
ಇನ್ನು ಮುಂದೆ ಅವರನ್ನ ಮೀಸಲಾತಿಯಿಂದ ಆಚೆ ಇಡಬೇಕು ಎಂಬ ಪ್ರಶ್ನೆ ಇದೆ.
ಇದನ್ನೂ ಕೂಡ ಸರ್ಕಾರ ಗಮನಿಸಬೇಕು.
ಬಹುಶಃ ಸಮಾಜಕ್ಕೆ ನ್ಯಾಯ ಒದಗಿಸಬೇಕು ಅಂತಾ ಯಾರ ತೀರ್ಮಾನ ಇದ್ರೂ.
ಉಳ್ಳವರಿಗೆ ಕೊಟ್ಕೊಂಡು ಹೋಗೋದು ನ್ಯಾಯ ಅಲ್ಲ ಅಂತಾ ನಾನೂ ಭಾವಿಸಿಲ್ಲ.
ವಿವೇಚನೆ ಇರೋರು ಕೂಡ ಯಾರೂ ಭಾವಿಸಲ್ಲ.
ಅಶಕ್ತರಿಗೆ ಶಕ್ತಿ ತುಂಬುವ ಮೀಸಲಾತಿಯನ್ನ ಒಂದು ಆಯೋಗ ಮಾಡಿಕೊಂಡಿದ್ದೇವೆ.
ಆಗಾಗಿ ಆಶಕ್ತರನ್ನ ಗುರ್ತಿಸಿಕೊಳ್ಳಬೇಕು.
ಆಶಕ್ತರು ಅಂದ್ರೆ, ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡೋ ಅಂತಹವರು.
ಇದುವರೆಗೂ ಸರ್ಕಾರದಿಂದ ಯಾವ ಅನುಕೂಲವನ್ನು ಪಡೆಯದೇ ಇರೋರು.
ಐಎಎಸ್ ಆಫೀಸರ್ಸ್ ನನ್ನ ಮಗ ಶೆಡ್ಯೂಲ್ ಕಾಸ್ಟ್ ಅಂತಾ ಎಂಬಿಬಿಎಸ್ ಸೀಟ್ ತೆಗೆದುಕೊಳ್ಳುವುದು.
ಎಕ್ಸಿಕ್ಯೂಟಿವ್ ಇಂಜಿನಿಯರ್, ಚೀಫ್ ಇಂಜಿನಿಯರ್ ಮಕ್ಕಳಿಗೆ ಸೀಟ್ ತೆಗೆದುಕೊಂಡು.
ಎಲ್ಲಾ ರೀತಿಯ ಸಮಾಜದ ಮೇಲ್ದರ್ಜೆಯ ಜನರಿಗೆ ತಕ್ಕನಾಗಿ ಇರೋ ಅಂತಹ ಶೈಕ್ಷಣಿಕ, ರಾಜಕೀಯ, ಆರ್ಥಿಕ ಸ್ಥಿತಿಯಲ್ಲಿದ್ದು,
ಹುಟ್ಟು ಒಂದೇ ಆಧಾರ ಮಾಡಿಕೊಂಡು ನಾನು ಶೆಡ್ಯೂಲ್ ಕಾಸ್ಟ್ ಅಂತಾ ಹೇಳಿ ರಿಸವೇಷನ್ ತೆಗೆದುಕೊಳ್ಳುತ್ತಿದ್ದರೆ.
ಅಂತವರನ್ನ ಆದಷ್ಟೂ ದೂರ ಇಟ್ರೆ ನಿಜವಾದ ಶೆಡ್ಯೂಲ್ ಕಾಸ್ಟ್‌ಗೆ ಒಳ್ಳೆಯದಾಗುತ್ತದೆ.
ಈ ಕ್ರಿಯೆಯನ್ನ ನಾವು ಮಾಡಿಕೊಂಡು ಬಂದ್ರೆ.
ಇನ್ನೊಂದು 15-20 ವರ್ಷದಲ್ಲಿ ಆಲ್ ಮೋಸ್ಟ್ ಆಲ್ ವರ್ಕ್ ಔಟ್ ಆಗಿಬಿಡುತ್ತದೆ.
ರಿಸವೇಷನ್ ಯಾರಿಗೆ ಬೇಕು ಅನ್ನೋರ ಸಂಖ್ಯೆ ಬಹಳ ಕಡಿಮೆ ಆಗಿಬಿಡುತ್ತದೆ.
ದೌಭಾಗ್ಯ ಅಂದ್ರೆ, ಇರೋರೇ ತೆಗೆದುಕೊಳ್ಳುತ್ತಿದ್ದಾರೆ.
ಇದು ಎಲ್ಲೋ ಒಂದು ಕಡೆ 75 ವರ್ಷ ಆದ್ರೂ ಇನ್ನೂ ಬೇಕಾ..? ಅಂತಾ ಪ್ರಶ್ನೆ ಮಾಡೋ ಸ್ಥಿತಿ ಇದೆ.
ನಾವು ಏನು ನಿರೀಕ್ಷೆ ಮಾಡಿಕೊಂಡು ಬಂದಿದ್ವಿ.
ಶೆಡ್ಯೂಲ್ ಕಾಸ್ಟ್ ನ ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡ್ತೀವಿ ಅಂತಾ.
ಆದ್ರೆ, ಅದು ಏಕೆ ಆಗಿಲ್ಲ ಅಂದ್ರೆ, ಅದರಲ್ಲೊಂದು ಗುಂಪು, ಸಮುದಾಯದ ಪ್ರಮುಖರು ಬಳಸಿಕೊಂಡು ಬಂದಿದ್ದೇ ದೌಭಾಗ್ಯ.
ನಿಜವಾಗಿಯೂ ಸುಪ್ರೀಂ ಕೋರ್ಟ್‌ನ ತೀರ್ಮಾನನ ಸ್ವಾಗತ ಮಾಡ್ತೇನೆ. ಸಂತೋಷ ಆಯ್ತು ರಿಪೋರ್ಟ್‌ನಲ್ಲಿ ಬರೆದಿದ್ದಕ್ಕೆ.
ಇದರಲ್ಲೂ ಉಳ್ಳವರು – ಇಲ್ಲದವರನ್ನ ನೋಡಬೇಕಾಗುತ್ತದೆ.
ಸಾಮಾಜಿಕ ಸ್ಟೇಟಸ್, ಆರ್ಥಿಕ ಅಂತಸ್ತು ತೆಗೆದುಕೊಂಡು ಮೀಸಲಾತಿಯನ್ನ ಅವರಿಂದ ಆಚೆ ತೆಗೆಯಬೇಕಾಗುತ್ತದೆ.
ಮೀಸಲಾತಿ ಬಳಸಿಕೊಂಡು ಮೇಲೆ ಬಂದ್ಮೇಲೆ, ಮತ್ತೆ-ಮತ್ತೆ ಅದೇ ಕುಟುಂಬ ತೆಗೆದುಕೊಳ್ಳುವುದು ಗೌರವ ಅಲ್ಲ ಅಂತಾ ಹೇಳಿದ್ವಿ.
ಅದನ್ನೇ ಸುಪ್ರೀಂ ಕೋರ್ಟ್ ಹೇಳಿರೊದ್ರಿಂದ ಸರ್ಕಾರ ಆದೇಶದಲ್ಲಿ ಹೊರಡಿಸಿ.
ಕನ್ಸರ್ನ್ ಇದ್ರೆ ಶೇ. 17ರಷ್ಟು ಮಾಡಬಹುದು.
ಇಲ್ಲ ಅಂದ್ರೆ ಶೇ. 15ರಷ್ಟು ಆದ್ರೂ ಮಾಡಲಿ.
ತಕ್ಷಣಕ್ಕೆ ಸ್ವಾಭಾವಿಕವಾಗಿ ಅವರ ಪಾಲನ್ನ ಹಂಚೋ ಕೆಲಸನ ಸರ್ಕಾರ ಮಾಡಬೇಕು.
More Stories
₹15,000 ಕೋಟಿ ವೆಚ್ಚದಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಹೆಚ್ಡಿಕೆ*
*ಆಡಳಿತ ಹಾಳಾಗಿದೆ, ಅಭಿವೃದ್ಧಿ ಪಾತಾಳ ಕಚ್ಚಿದೆ : ಕುಮಾರಸ್ವಾಮಿ ಕಿಡಿ*
ದಸರಾ 1 ಜಾತಿ- 1 ಧರ್ಮಕ್ಕೆ ಸೀಮಿತವಲ್ಲ, ಸರ್ವ ಜನಾಂಗದ ಸಂಭ್ರಮದ ಹಬ್ಬ : ಸಿದ್ದರಾಮಯ್ಯ