December 23, 2024

ಒಳಮೀಸಲಾತಿ ಬಗ್ಗೆ ಮಾಜಿ ಸಚಿವ ಮಾಧುಸ್ವಾಮಿ ಏನಂದ್ರು…? ಒಳ ಮೀಸಲಾತಿಯ ಸುದೀರ್ಘ ವಿಶ್ಲೇಷಣೆ ಇಲ್ಲಿದೆ ನೋಡಿ.

ಸುಪ್ರೀಂ ಕೋರ್ಟ್‌ನ ಒಳ ಮೀಸಲಾತಿ ತೀರ್ಪು ವಿಚಾರ.

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಹೇಳಿಕೆ.

ಸದ್ಯ ಪರಿಶಿಷ್ಟ ಜಾತಿಗೆ ಶೇ. 15ರಷ್ಟು ಹಾಗೂ ಪರಿಶಿಷ್ಟ ಪಂಗಡಕ್ಕೆ 3ರಷ್ಟು ಮೀಸಲಾತಿ ಇದೆ.

ಒಟ್ಟು 18ರಷ್ಟು ಎಸ್ಸಿ ಹಾಗೂ ಎಸ್‌ಟಿಗೆ ಮೀಸಲಾತಿ ರಿಸರ್ವ್ ಮಾಡಲಾಗಿದೆ.

ಇದು ಸಂವಿಧಾನಾತ್ಮಕ ಮೀಸಲಾತಿ.

ಈ ಮೀಸಲಾತಿ ಕೆಲವೇ-ಕೆಲವು ಗುಂಪಿಗೆ ಹೋಗ್ತಿದೆ ಅಂತಾ ಹೇಳಿ ಅದರಲ್ಲೇ ಕೆಲವು ಪಂಗಡಗಳು ಹೋರಾಟವನ್ನ ಮಾಡಿದ್ದವು.

ಈ ಹೋರಾಟ ಕೋರ್ಟ್‌ನ ಮೆಟ್ಟಿಲು ಹತ್ತಲಾಯ್ತು.

ಈ ಸಂಬಂಧ ಸರ್ಕಾರ ಸದಾಶಿವ ಆಯೋಗ ಸಮಿತಿ ರಚನೆ ಮಾಡಲಾಯ್ತು.

ಮೀಸಲಾತಿ ಹೋರಾಟ ಹೇಗೆ ಹೋಗಬೇಕು.

ಏನು ಮಾಡಬೇಕು ಅಂತಾ ವರದಿಯನ್ನ ಅವರಿಂದ ತೆಗೆದುಕೊಂಡ್ರು.

ವರದಿಯನ್ನೂ ಕೂಡ ಕೊಡಲಾಯ್ತು.

ಅದರ ಪ್ರಕಾರ. ಎಸ್ಸಿ ಜನಾಂಗಕ್ಕೆ ನಾಲ್ಕು ಗುಂಪನ್ನ ಮಾಡಲಾಯಿತು.

ಎಡಗೈ(ಮಾದಿಗ ಜನಾಂಗ), ಬಲಗೈ ಹೊಲೆಯ ಜನಾಂಗ), ಅಂತಾ ಮಾಡಿದ್ರು.

ಎಡಗೈಗೆ 6 ರಷ್ಟು ಹಾಗೂ ಬಲಗೈಗೆ 5 ರಷ್ಟು ಮೀಸಲಾತಿ ಕೊಟ್ರು.

ಇತರೆ ಶೆಡ್ಯೂಲ್ ಕಾಸ್ಟ್ ಲಂಬಾಣಿ, ಬೋವಿ ಹಾಗೂ ಇತರೆ ಏನು ಇದ್ರು ಟಚ್ಚಬಲ್ ಸೆಡ್ಯೂಲ್ ಕಾಸ್ಟ್ ಅಂತಾ ಶೇ. 3ರಷ್ಟು ಕೊಡಲಾಯಿತು.

ಇನ್ನು ಉಳಿದ 1ರಷ್ಟನ್ನ ಅತ್ಯಂತ ಕಡಿಮೆ ಸಂಖ್ಯೆ ಇರುವ ಶೆಡ್ಯೂಲ್ ಕಾಸ್ಟ್‌ಗೆ ಅಂತಾ ಮೀಸಲು ಇಡಲಾಯಿತು.

ಒಟ್ಟು 15ರಷ್ಟು ಮೀಸಲಾತಿಯನ್ನ ಹಂಚಿಕೆ ಮಾಡಿ ಇತ್ಯರ್ಥ ಮಾಡಿದ್ರು.

ಇದನ್ನೇ ಇಟ್ಟುಕೊಂಡು ಸುಪ್ರೀಂ ಕೋರ್ಟ್‌ ಮುಂದೆ ಮಾಡಬಾರದು ಅಂತಾ ತೀರ್ಮಾನ ಆಯ್ತು.

ಕೋರ್ಟ್‌ನ ಆದೇಶ ಇಟ್ಟುಕೊಂಡು ಒಳಮೀಸಲಾತಿ ಮಾಡೋದಕ್ಕೆ ಬರೋದಿಲ್ಲ ಅಂತಾ ಹೇಳಿ ವಾದ ಮಾಡಿಕೊಂಡು ಬಂದಿದ್ವಿ.

ಬಿಜೆಪಿ ಸರ್ಕಾರ ಬಂದಾಗ ಒತ್ತಡ ಜಾಸ್ತಿ ಆದಾಗ ಎಸ್ಸಿ-ಎಸ್‌ಟಿ ಮೀಸಲಾತಿ ಹೆಚ್ಚು ಮಾಡಬೇಕು ಅಂತಾ ಒತ್ತಡ ಬಂದಾಗ.

ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಿದ್ವಿ. ಅವರು ಎಸ್ಸಿಗೆ 15 ರಿಂದ 17ಕ್ಕೆ ಹೆಚ್ಚಿಗೆ ಮಾಡಿದ್ರು.

ಟಚ್ಚಬಲ್ಸ್‌ಗೆ ಶೇ. 3ರಿಂದ 7ರಷ್ಟು ಜಾಸ್ತಿ ಮಾಡಿಕೊಟ್ರು.

ಇದನ್ನ ಹೇಗೆ ಇತ್ಯರ್ಥ ಮಾಡಬೇಕು ಅಂತಾ ಹೇಳಿ ಸಚಿವ ಸಂಪುಟದಲ್ಲಿ ಒಂದು ಸಮಿತಿ ಮಾಡಿ ನನ್ನನ್ನ ಅಧ್ಯಕ್ಷನನ್ನಾಗಿ ಮಾಡಿದ್ರು.

ಎಡಗೈಗೆ ಏನು ಶೇ. 6ರಷ್ಟು ಇದದ್ದನ್ನ ಹಾಗೆಯೇ ಇಟ್ವಿ.

ಬಲಗೈಗೆ ಇದ್ದ ಶೇ. 5ರಷ್ಟು ಇದ್ದದನ್ನ 5.50ರಷ್ಟು ಹೆಚ್ಚು ಮಾಡಿದ್ವಿ.

ಬೋವಿ-ಲಂಬಾಣಿ ಜನಾಂಗಕ್ಕೆ 3 ರಿಂದ ಒಂದೂವರೆ ಅಂದರೆ 4.50ರಷ್ಟು ಜಾಸ್ತಿ ಮಾಡಿದ್ವಿ.

ಇನ್ನು ಉಳಿಕೆ ಸಣ್ಣ- ಪುಟ್ಟ ಜಾತಿಗೆ ಶೇ.1ರಷ್ಟು ಜಾಸ್ತಿ ಮಾಡಿ ಮೀಸಲಾತಿ ಅನೌನ್ಸ್ ಮಾಡಿದ್ವಿ.

ಒಳಮೀಸಲಾತಿ ಮಾಡಲಿಕ್ಕೂ ರಾಜ್ಯಗಳಿಗೆ ಅವಕಾಶ ಇಲ್ಲ ಅಂತಾ ಸುಪ್ರೀಂಕೋರ್ಟ್‌ನ ಡಿಶಿಷನ್ ಬಂತು.

ಒಂದು ಇಷ್ಯೂ, ಶೇ 50ರಷ್ಟು ಮೀಸಲಾತಿ ದಾಟಬಾರದು ಅನ್ನೋದು.

ಈಗಾಗಲೇ ಶೇ. 6ರಷ್ಟು ಜಾಸ್ತಿ ಕೊಟ್ಟಿದ್ರಿಂದ ಕೋರ್ಟ್‌ನ ಆದೇಶ ದಾಟಿ ಹೋಗೋದು ಹೇಗೆ ಅಂತಾಯ್ತು.

ಎರಡನೇ ಇಷ್ಯೂಗೆ ನಾವೆಲ್ಲ ತಲೆ ಕೆಡಿಸಿಕೊಂಡು, ಶೇ50ರಷ್ಟು ದಾಟಿ ಹೋದ್ರೂ ಆಮೇಲೆ ನಿಭಾಯಿಸಿಕೊಳ್ಳುತ್ತೇವೆ ಅಂತಾ ಹೇಳಿ.

ಶೇ. 24ರಷ್ಟು ಮೀಸಲಾತಿ ನಿಗಧಿ ಮಾಡಿ ಕೊಟ್ವಿ, ಹಾಗೆಯೇ ಅನುಷ್ಠಾನಕ್ಕೂ ಆದೇಶ ಮಾಡಿದ್ವಿ.

ಒಳಮೀಸಲಾತಿ ಮಾಡೋ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಅಂತಾ ಕೋರ್ಟ್‌ನ ಆದೇಶ ಬಂತು.

ರಾಜ್ಯಗಳ ಪರಿಸ್ಥಿತಿ, ಜನಸಂಖ್ಯೆ ಹಾಗೂ ಜೀವನದ ಮಟ್ಟಕ್ಕೆ ಅನುಗುಣವಾಗಿ ಶೆಡ್ಯೂಲ್ ಕಾಸ್ಟ್‌‌ಗಳಿಗೆ.

ಎಷ್ಟೆಷ್ಟು ಕೊಡಬಹುದು ಅನ್ನೊದನ್ನ ಸುರ್ಪೀ ಕೋರ್ಟ್ ತೀರ್ಮಾನವನ್ನ ಕೊಟ್ಟಿದೆ.

ರಾಜ್ಯದ ಮುಂದೆ ಎರಡು ಇಷ್ಯೂ ಇದೆ, 15+3 ರಷ್ಟು ಮೀಸಲಾತಿ ಕೊಟ್ಟುಕೊಂಡು ಹೋಗೋದಾದ್ರೆ ಯಾವುದೇ ತಕರಾರು ಇಲ್ಲ.

ಚಾಲ್ತಿಯಲ್ಲಿರುವ ಶೇ. 50ರಷ್ಟು ಮೀಸಲಾತಿ ಒಳಗೆ ಬರುತ್ತದೆ.

ಒಳಮೀಸಲಾತಿ ಪ್ರಿನ್ಸಿಪಲ್ ಒಪ್ಪಿಕೊಳ್ಳಬೇಕಾದ್ರೆ ತಕ್ಷಣದಿಂದ ಜಾರಿ ಮಾಡೋದಕ್ಕೆ ಕಾನೂನಲ್ಲಿ ಅಡಚಣೆ ಇಲ್ಲ.

ಶೇ.50ರಷ್ಟು ದಾಟುತ್ತದೆ ಅಂದ್ರೆ, ಸಂವಿಧಾನದ ತಿದ್ದುಪಡಿಯನ್ನ ಪಾರ್ಲಿಮೆಂಟ್‌ನಲ್ಲಿ ಮಾಡಿಸಿಕೊಳ್ಳುತ್ತಾರಾ..?

About The Author