ವಯನಾಡು : ಕಾಂಗ್ರೆಸ್ ಪಕ್ಷದಿಂದಲೇ ಕೇರಳದ ವಯನಾಡಿನಲ್ಲಿ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಶ್ವಾಸನೆ ನೀಡಿದ್ದಾರೆ.
ದುರಂತ ಸ್ಥಳದಲ್ಲೇ ನಿನ್ನೆಯಿಂದಲೂ ಇದ್ದೇನೆ. ಇದು ಯಾರೂ ಕಂಡರಿಯದ ರಣ ಭೀಕರ ದುರಂತ. ಈ ಸಂಬಂಧ ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದೇವೆ. ಇಲ್ಲಿನ ಸಾವು- ನೋವಿನ ಮಾಹಿತಿ ಪಡೆದಿದ್ದೇನೆ. ಮನೆಗಳ ಹಾನಿಯ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದೇನೆ. ಅಲ್ಲದೆ, ಕೈಲಾದ ಸಹಾಯ ಮಾಡಲು ಇಲ್ಲೇ ಇದ್ದೇನೆ ಅಂತಾ ವಿವರಿಸಿದರು.
ಇಡೀ ಕಾಂಗ್ರೆಸ್ ಕುಟುಂಬ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಕಟಿಬದ್ದವಾಗಿದೆ. ಈ ಪರಿಯ ದುರಂತವನ್ನು ಕೇರಳ ಎಂದೂ ಕಂಡಿಲ್ಲ. ಇದೀಗ ನಡೆದು ಹೋಗಿದೆ. ನಾನು ದೆಹಲಿ ಹಾಗೂ ಕೇರಳದ ಸಿಎಂ ಜೊತೆ ಪ್ರಸ್ತಾಪಿಸುತ್ತೇನೆ. ಇದೊಂದು ವಿಭಿನ್ನ ದುರಂತ ಆಗಿದ್ದು, ವಿಭಿನ್ನ ಪರಿಹಾರ ಕಾರ್ಯಗಳನ್ನ ಮಾಡಲು ಪರಿಗಣಿಸಬೇಕು ಎಂದು ಮನವಿ ಮಾಡ್ತೇನೆ ಎಂದರು.
More Stories
ಹುಣಸೆ ಬೀಜದಿಂದ ಮೂಡಿ ಬಂದ ಅತ್ಯಾಕರ್ಷಕ ಗಣಪ.
ನಾಗೇಂದ್ರ ಸಣ್ಣ ಮೀನು, ಸಿಎಂ – ಡಿಸಿಎಂ ತಿಮಿಂಗಿಲ : ಶೋಭಾ ಕರಂದ್ಲಾಜೆ.
ಬೆಂಗಳೂರಿನಲ್ಲಿ ಹೊಸ ಡ್ರಗ್ ಹುಟ್ಟಿಕೊಂಡಿದೆ: ನಟ ದುನಿಯಾ ವಿಜಯ್.