December 23, 2024

ನಾಗೇಂದ್ರ ಸಣ್ಣ ಮೀನು, ಸಿಎಂ – ಡಿಸಿಎಂ ತಿಮಿಂಗಿಲ : ಶೋಭಾ ಕರಂದ್ಲಾಜೆ.

ಮೈಸೂರು : ವಾಲ್ಮೀಕಿ ನಿಗಮದ ಹಗರಣದ ಸಂಬಂಧ ಮಾಜಿ ಸಚಿವ ಬಿ. ನಾಗೇಂದ್ರ ಸಣ್ಣ ಮೀನು ಆದ್ರೆ, ಸಿಎಂ ಹಾಗೂ ಡಿಸಿಎಂ ತಿಮಿಂಗಿಲಗಳು ಅಂತಾ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಮುಡಾ ಹಾಗೂ ವಾಲ್ಮೀಕಿ ನಿಗಮ ಎರಡರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪರಾಧಿ.‌ ಈ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಪಾತ್ರ ಕೂಡ ಇದೆ. ಈ ಪ್ರಕರಣಗಳ ನೇರ ಹೊಣೆಗಾರಿಕೆ ಹೊತ್ತು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು, ರಾಜ್ಯಪಾಲರ ನೊಟೀಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆದರಿದ್ದಾರೆ. ಅದಕ್ಕಾಗಿಯೇ, ಸಂಪುಟ ಸಭೆ ಕರೆದು ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ. ಸರ್ಕಾರ ರಾಜ್ಯಪಾಲರನ್ನ ಹೆದರಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

About The Author