ರಾಮನಗರ : ಚನ್ನಪಟ್ಟಣ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕಳ್ಳ-ಕಳ್ಳರೇ ಒಂದಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಮೇಲೆ ಗದಾಪ್ರಹಾರ ನಡೆಸಿದ್ದಾರೆ.
ಅವರೆಲ್ಲಾ ರಾಜಕೀಯ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ನಾನು ಅಭಿವೃದ್ದಿ ವಿಷಯ ಇಟ್ಟುಕೊಂಡು ಮತ ಕೇಳುತ್ತಿದ್ದೇನೆ. ಮೂರು ವರ್ಷದಲ್ಲೇ ರಾಮನಗರ – ಚನ್ನಪಟ್ಟಣ ಅವಳಿ ನಗರಗಳಾಗುತ್ತವೆ. ರೇಷ್ಮೆ ಮಾರುಕಟ್ಟೆ ಬಳಿ ಕಾರ್ಖಾನೆ ಸ್ಥಾಪನೆ ಮಾಡುತ್ತೇವೆ. ನಿಮಗೆ ಉದ್ಯೋಗ ಕೊಡಿಸುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದರು.
ದಶಾವರ ಗ್ರಾಮದಲ್ಲಿ ಪ್ರಚಾಭಾಷಣ ಮಾಡಿದ ಕೇಂದ್ರ ಸಚಿವರು, ಚನ್ನಪಟ್ಟಣದಲ್ಲಿ ಇಷ್ಟು ವಾಹನಗಳ ಓಡಾಟವನ್ನು ನಾನು ನೋಡೇ ಇರಲಿಲ್ಲ. ಮೈಸೂರಿನ ಬೈ ಎಲೆಕ್ಷನ್ ನೆನಪಾಗುತ್ತದೆ. ರಾಮನಗರ ಜಿಲ್ಲೆಗೆ ಕಾಂಗ್ರೆಸ್ ನಿಂದ ಯಾವುದೇ ಕೊಡುಗೆ ಇಲ್ಲ. ಹೆಚ್ಡಿಕೆ ನೋಟು, ಯೋಗೇಶ್ವರಗೆ ವೋಟ್ ಅಂತ ಡಿಕೆಶಿ ಹೇಳಿದ್ದಾರೆ. ಆದರೆ, ಡಿಕೆಶಿ ನೋಟು ಡಾಕ್ಟರಿಗೆ ವೋಟು ಎಂದು ಇದೇ ಯೋಗೇಶ್ವರ್ ಹೇಳಿದ್ದರು. ಡಿಕೆ ಸಹೋದರರನ್ನು ಪೊರಕೆಯಲ್ಲಿ ಹೊಡೆಸುತ್ತೇನೆ ಎಂದು ಹೇಳಿದ್ದರು ಯೋಗೇಶ್ವರ್, ಈಗ ನೋಡಿದರೆ ಕಳ್ಳ ಕಳ್ಳರೇ ಒಂದಾಗಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.
ಆಡಳಿತ ಹಾಳಾಗಿ ಹೋಗಿದೆ
ರಾಜ್ಯದಲ್ಲಿ ಆಡಳಿತ ಹಾಳಾಗಿ ಹೋಗಿದೆ. ಬೆಳೆ ನಷ್ಟವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಆರ್ಥಿಕವಾಗಿ ಸಂಕಟಕ್ಕೆ ಸಿಲುಕಿದೆ. ಅಭಿವೃದ್ಧಿ ಪಾತಾಳ ಕಚ್ಚಿದೆ. ಮುಂದೆ ಒಳ್ಳೆಯ ಸರ್ಕಾರ ಬರುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. ಹೊಸದಾಗಿ 1.5 ಲಕ್ಷ ಕೋಟಿ ಸಾಲ ಮಾಡುತ್ತಿದೆ ರಾಜ್ಯ ಸರ್ಕಾರ. ಗ್ಯಾರಂಟಿ ಎಂದು ಹೇಳುತ್ತಾ ಜನರನ್ನು ಸಾಲದ ದವಡೆಗೆ ನೂಕುತ್ತಿದೆ. ತನ್ನ ಹೊಣೆಗೇಡಿತನ, ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡಿಗರನ್ನು ಎಲ್ಲಾ ಭಾರವನ್ನು ಸರ್ಕಾರ ಜನರ ಮೇಲೆ ಹಾಕುತ್ತಿದೆ. ಕರ್ನಾಟಕದ ಭವಿಷ್ಯದ ತಲೆಮಾರನ್ನು ಕಾಂಗ್ರೆಸ್ ಸರ್ಕಾರ ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ಈ ಚುನಾವಣೆ ಧರ್ಮ-ಅಧರ್ಮದ ಚುನಾವಣೆಯಾಗಿದೆ. ನಿಖಿಲ್ ಇಲ್ಲಿ ಸ್ಪರ್ಧೆ ಮಾಡುತ್ತಿರುವುದು ದೇವರ ಇಚ್ಚೆ ಅಷ್ಟೇ.
ಆತ ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅಂತ ಹೇಳಿಲ್ಲ ಎಂದು ಅವರು ಹೇಳಿದರು.
More Stories
₹15,000 ಕೋಟಿ ವೆಚ್ಚದಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಹೆಚ್ಡಿಕೆ*
ದಸರಾ 1 ಜಾತಿ- 1 ಧರ್ಮಕ್ಕೆ ಸೀಮಿತವಲ್ಲ, ಸರ್ವ ಜನಾಂಗದ ಸಂಭ್ರಮದ ಹಬ್ಬ : ಸಿದ್ದರಾಮಯ್ಯ
*ಸಚಿವ ಸಂಪುಟದಲ್ಲಿ ಚರ್ಚಿಸಿ, ಜಾತಿ ಗಣತಿ ವರದಿ ಜಾರಿ ಬಗ್ಗೆ ತೀರ್ಮಾನ : ಮುಖ್ಯಮಂತ್ರಿ ಸಿದ್ದರಾಮಯ್ಯ*