ತುಮಕೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಜೈಲಿನಿಂದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಆಶ್ವೇಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ದರ್ಶನ್ ಬಿಡುಗಡೆ ಆಗ್ತಾರೆ ಎನ್ನಲಾಗಿದೆ. ಮಾತ್ರವಲ್ಲದೇ 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ ಎಂಬ ಭವಿಷ್ಯ ನುಡಿಯಲಾಗಿದೆ.
ಹೌದು, ತುಮಕೂರು ಹೊರವಲಯದ ಚಿನಗ ಗ್ರಾಮದಲ್ಲಿನ ಶ್ರೀ ಮೂಕಾಂಬಿಕಾ ದೇವಿ ದೇವಾಲಯದಲ್ಲಿ ಹೂ ಕೊಡುವ ಮೂಲಕ ದರ್ಶನ್ ಬಿಡುಗಡೆಗೆ ತಾಯಿ ಮೂಕಾಂಬಿಕಾ ದೇವಿ ದರ್ಶನ್ ಬಿಡುಗಡೆಗೆ ಮುನ್ಸೂಚನೆ ಕೊಟ್ಟಿದ್ದಾಳೆ. ಇದೇ ವೇಳೆ ಮೂಕಾಂಬಿಕಾ ದೇವಿ ಆರಾಧಕರಾದ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನಟ ದರ್ಶನ್ ಕುರಿತಂತೆ ಮೂಕಾಂಬಿಕಾ ದೇವಿಯ ಹೂ ಪ್ರಸಾದ ಅಚ್ಚರಿ ಮೂಡಿಸಿದೆ. ದೇವಿಯ ಹೂ ಪ್ರಸಾದದಿಂದ ಜ್ಯೋತಿಷಿಗಳು ದರ್ಶನ್ ಬಿಡುಗಡೆಯನ್ನು ದೃಢೀಕರಿಸಿದ್ದಾರೆ. ಕಾರ್ತಿಕ್ ಮಾಸದ ಅಂತ್ಯದೊಳಗೆ ನಟ ದರ್ಶನ್ ಬಿಡುಗಡೆ ಆಗುತ್ತಾರೆ. ದರ್ಶನ್ ಅವರ ಜನ್ಮ ಜಾತಕದ ಪ್ರಕಾರ ಶುಭ ಸಮಯ ಪ್ರಾರಂಭವಾಗಿದೆ. ದೇವಿಯ ಮುನ್ಸೂಚನೆಯಂತೆ ದರ್ಶನ್ ಬಿಡುಗಡೆ ಆಗುತ್ತಾರೆ, ದೇವಿಯ ಆಶೀರ್ವಾದ ಸಂಪೂರ್ಣ ಇದೆ ಎಂದಿದ್ದಾರೆ.
ದರ್ಶನ್ರ ದಶಾಬುಕ್ತಿಗಳು ಅಂತ್ಯವಾಗಿ, ಶುಭ ದಶಾಭುಕ್ತಿಗಳು ಪ್ರಾರಂಭವಾಗಿವೆ. ಅಭಿಮಾನಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಪೂಜಾ-ಪುನಸ್ಕಾರ ಎಲ್ಲವನ್ನೂ ನಡೆಸಿಕೊಂಡು ಬಂದಿರೊದ್ರಿಂದ ಆ ದೇವಿಯ ಅನುಗ್ರಹ ಇರುತ್ತದೆ. ಆ ದೇವಿಯ ಅನುಗ್ರಹ ಕೂಡ ಇರುವುದರಿಂದ ದರ್ಶನ್ ಬಿಡುಗಡೆ ಆಗ್ತಾರೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಹೇಳಿದ್ದಾರೆ.
ಆ ದೇವಿ ಬಲಗಡೆಯಿಂದ ಹೂ ಪ್ರಸಾದವನ್ನ ಕೊಟ್ಟಿದ್ದಾಳೆ. ಈ ದೇವಿ ಹೂ ಪ್ರಸಾದ ಕೊಟ್ರೆ ಇಲ್ಲಿವರೆಗೂ ಯಾವುದೂ ಕೂಡ ಸುಳ್ಳಾಗಿಲ್ಲ. ಸಾಕಷ್ಟು ರೀತಿಯಲ್ಲಿ ಒಳ್ಳೆಯದಾಗಿದೆ ಅಂತಾ ಭಕ್ತಾಧಿಗಳು ಹೇಳಿಕೊಂಡು ಬಂದಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆ ಕೂಡ ಇದೆ. ಆತಂಕಪಡುವ ಆವಶ್ಯಕತೆ ಇಲ್ಲ ಅಭಿಮಾನಿಗಳು ತಮ್ಮ ಸೇವೆಯನ್ನು ಮಾಡಿಕೊಂಡು ಹೋಗಿ. ದೇವಸ್ಥಾನಗಳಲ್ಲಿ ಅನ್ನ ದಾಸೋಹ, ಅಭಿಷೇಕ, ಅಲಂಕಾರ ಆಗಿರಬಹುದು. ಅಭಿಮಾನಿಗಳು ನೀವು ಇರುವ ಊರುಗಳಲ್ಲಿ ದೇವಿ ಆರಾಧನೆ ಮಾಡಿಕೊಂಡು ಹೋಗಿ, ದೇವಿಯ ಆಶೀರ್ವಾದ ಪ್ರಾಪ್ತಿ ಆಗಲಿದೆ ಎಂದಿದ್ದಾರೆ.
2027ರ ನಂತರ ದರ್ಶನ್ ಜೀವನ ಶೈಲಿ ಬದಲಾಗಲಿದೆ. 2027ರ ನಂತರ ರಾಜಕೀಯ ಉನ್ನತ ಸ್ಥಾನ ಪಡೆಯುತ್ತಾರೆ. ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. ಹಾಗಾಗಿ ಇದರಲ್ಲಿ ಯಾವುದೇ ಅನುಮಾನ ಬೇಡ. ಈಗ 2024ರ ಅಂತ್ಯದಲ್ಲಿ ಇದ್ದೇವೆ. 2025-2026ರ ನಂತರ 2027ರಿಂದ ಒಳ್ಳೆಯ ಸಮಯ ಪ್ರಾರಂಭ ಆಗ್ತದೆ. ಒಳ್ಳೆಯ ರೀತಿಯ ಜೀವನ ಕಲ್ಪಿಸಿಕೊಡುತ್ತಾಳೆ. ಯಾವುದೇ ಅನುಮಾನ ಬೇಡ. ರಾಜಕೀಯ ಪ್ರವೇಶದ ಯೋಗ ಕೂಡ ದರ್ಶನ್ಗೆ ಇದೆ. ದಶಾಬುಕ್ತಿಗಳು ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸಿಬಿಡುತ್ತದೆ ಎಂದು ತಿಳಿಸಿದರು.
ಪ್ಲೋ…
More Stories
₹15,000 ಕೋಟಿ ವೆಚ್ಚದಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಹೆಚ್ಡಿಕೆ*
*ಆಡಳಿತ ಹಾಳಾಗಿದೆ, ಅಭಿವೃದ್ಧಿ ಪಾತಾಳ ಕಚ್ಚಿದೆ : ಕುಮಾರಸ್ವಾಮಿ ಕಿಡಿ*
ದಸರಾ 1 ಜಾತಿ- 1 ಧರ್ಮಕ್ಕೆ ಸೀಮಿತವಲ್ಲ, ಸರ್ವ ಜನಾಂಗದ ಸಂಭ್ರಮದ ಹಬ್ಬ : ಸಿದ್ದರಾಮಯ್ಯ